Thursday, March 25, 2010

ಈ ಅಜ್ಜ ನೆಟ್ಟ ಆಲದಮರಕ್ಕೆ ಉರುಳು ಹಾಕಿಕೊಳ್ಳಲೇ ಬೇಕು


ಈ ಅಜ್ಜ ನೆಟ್ಟ ಆಲದ ಮರಕ್ಕೆ ಉರುಳು ಹಾಕಿಕೊಳ್ಳಲೇ ಬೇಕು! ಡಿ. ವಿ. ಜಿ ಯವರ ಬದುಕಿನ ದರ್ಶನವನ್ನು ಪಡೆದರೆ ಹೀಗನ್ನಿಸುತ್ತದೆ. ಈ ಹಿರಿಯ ಮಾನವಾತಾವಾದಿ, ರಾಜಕಾರಣಿ, ಚಿಂತಕ, ಪತ್ರಕರ್ತ ಮತ್ತು ಇಷ್ಟಕ್ಕೇ ಮುಗಿಯುವುದಿಲ್ಲ ಡಿ.ವಿ.ಜಿ ಎಂಬ ಅಶ್ವತ್ಥ ವೃಕ್ಷದ ರೆಂಬೆ ಕೊಂಬೆಗಳ ವಿಸ್ತಾರವನ್ನು ಅಳೆಯಲಾಗದು... ಅವರೇ ಅಂದಂತೆ ವಿಸ್ತಾರಧೀಂ ಬಾಳು, ವೈಶಾಲ್ಯದೀಂ ಬಾಳು... ನಿಜವಾಗಿಯೂ ಹಾಗೆ ಬಾಳಿದವರು. ಆ ಕಾರಣಕಾ್ಕಗಿಯೇ ಅವರು ನೆನಪಿನಲ್ಲುಳಿಯುತ್ತಾರೆ ಮತ್ತು ಮರೆತು ಹೋಗುತ್ತಾರೆ!
ಹೌದು, ಮರೆತು ಹೋಗುತ್ತಾರೆ. ಮರೆತು ಬಿಡುತ್ತೇವೆ. ಯಾಕೆಂದರೆ ಇಂದು ಹಣದ ಥೈಲಿಯ ಹಿಂದೆ ಗೊತ್ತು ಗುರಿ ಇಲ್ಲದೇ ಹೊರಟ ಆಧುನಿಕ ಪ್ರಭೃತಿಗಳು ನಾವು. ಯುವಕರಾಗಿದ್ದಾಗಿನಿಂದಲೂ ಸಾಮಾಜಿಕ ಚಿಂತನೆಗಳನ್ನು ನಡೆಸುತ್ತಾ ಬಂದವರು. ಬದುಕಿಗೊಂದು ಮಾರ್ಗವನ್ನು ಬರವಣಿಗೆಯ ಮೂಲಕ ಕಂಡುಕೊಂಡವರು. ಯಾರಿಗೂ ಯಾವ ಕಾರಣಕ್ಕೂ ಅಂಜದೇ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದವರು. ವೇದವನ್ನು, ಶಾಸ್ತ್ರಗಳನ್ನು " ವಿವಿಧ ಭಾಷೆಗಳ ಸಾಹಿತ್ಯವನ್ನು ದಿವ್ಯ ತಾದಾತ್ಮ್ಯದಿಂದ ಓದಿಕೊಂಡವರು. ತಮ್ಮ ಮನಸ್ಸಾಕ್ಷಿಯ ವಿರುದ್ಧವಾಗಿ ಯಾವಾಗಲೂ ನಡೆದುಕೊಂಡವರಲ?. ನಾವೆಹಾಗೇನೂ ಅಲ್ಲವಲ್ಲಾ... ಅದಕ್ಕಾ ಅವರು ಮರೆತು ಹೋಗುತ್ತಾರೆ.
ಅವರ ಪತ್ರಿಕಾವೃತ್ತಿಯ ಹಿಂದಿನ ಉದ್ದೇಶಗಳು ಇಂದಿನ ಯಾವ ಪತ್ರಕರ್ತನಲ್ಲಿಯೂ ಕಾಣುವುದಕ್ಕೆ ಸಾಧ್ಯವಿಲ್ಲ.ಮೈಸೂರು ಟೈಮ್ಸ್ ಪತ್ರಿಕೆಗೆ ಅವರು ಬರೆದ ಲೇಖನವೊಂದರ ಕುರಿತು ಮಾನನಷ್ಟ್ಠ ವೊಕದ್ದಮೆ ದಾಖಲಾಯಿತು. ಆಗ ಅದರ ಸಂಪಾದಕರು ರಾಜಿ ಮಾಡಿಕೊಂಡು ಪ್ರಕರಣವನ್ನು ಮುಗಿಸಿದ್ದರು. ಆದರೆ ಗುಂಡಪ್ಪನವರ ಬಳಿ ಇದನ್ನು ಸಹಿಸಲಾಗಲಿಲ್ಲ. ರಾಜೀನಾಮೆ ಕೊಟ್ಟರು. ಪತ್ರಿಕೋದ್ಯೋಗಿಯ ಪ್ರಥಮ ಕರ್ತವ್ಯ ಸತ್ಯ ಪ್ರತಿಪಾದನೆಯೇ ಆಗಿರಬೇಕು ಎಂಬ ಅವರ ನಿಲುವಿನಂತೆ ಸ್ವತಃ ಪತ್ರಿಕೆಯನ್ನು ಶುರು ಮಾಡಿದರು. ವಿವಿಧ ಹಿತಾಸಕ್ತಿಗಳು ಈ ಪತ್ರಿಕೆಯನ್ನು ಸ್ಥಗಿತಗೊಳಿಸಲು ಒತ್ತಾಯ ಮಾಡುತ್ತಲೇ ಇದ್ದರು. ಡಿ.ವಿ.ಜಿ. ಇದಕ್ಕೆಲ್ಲಾ ಖ್ಯಾರೇ ಅನ್ನಲಿಲ್ಲ.

ಇಷ್ಟರಲ್ಲಾಗಲೇ ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯ ತದನಂತರ ಮಿರ್ಜಾ ಇಸ್ಮಾಯಿಲ್ ಮುಂತಾದವರು ಇವರನ್ನು ಸಲಹೆಯನ್ನು ಕೇಳುವುದಕ್ಕಾಗಿ ಆಗಾಗ ಬರುತ್ತದ್ದರು. ರಾಜಕೀಯದ ಬಗ್ಗೆ,ಸಾರ್ವಜನಿಕ ಜೀವನದ ಬಗ್ಗೆ ಇವರ ವಿಚಾರಧಾರೆಗಳು ಉತ್ತಮವಾಗಿದ್ದವು. ಇವತ್ತಿನ ಹಾಳು ಆಡುಂಬೋಲವನ್ನು ಕಂಡಾಗಲೆಲ್ಲಾ ಡಿವಿಜಿ ನೆನಪಾಗುತ್ತಾರೆ. ಜನರ ಹಿತ ಕಾಯುವ ದೃಷ್ಟಿಯಿಂದ ಅವರು ಹಾಕಿ ಕೊಡಲೆತ್ನಿಸಿದ ರೀತಿ ರೀವಾಜುಗಳೆಲ್ಲಾ ಅನುಷ್ಠಾನಕ್ಕೆ ಬಂದಿದ್ದರೆ ಇವತ್ತಿನ ಸಾಮಾಜಿಕ ಸ್ಥಿತಿ ಹೀಗಿರುತ್ತಿರಲಿಲ್ಲ. ಮಂಕುತಿಮ್ಮನ ಕಗ್ಗವೆಂಬ ಕನ್ನಡದ ಭಗವದ್ಗೀತೆ ಅವರ ಆಚಾರ, ವಿಚಾರಗಳ ಶುದಖತೆ, ಪಾ್ರಮಾಣಿಕತೆಗಳಿಂದಲೇ ಹುಟ್ಟಿದು?. ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಹುಟ್ಟು ಕಾಕಿದರು. ವೊನ್ನೆ 17 ಕ್ಕೆ ನಡೆದ ಅವರ 123 ನೇ ಹುಟ್ಟು ಹ್ಡ್ಬದ ಸಂದರ್ಭದಲ್ಲಿ ಅವರನ್ನು ಹತ್ತಿರದಿಂದ ಕಂಡವರೊಬ್ಬರು ಹೇಳುತ್ತಿದ್ದರು, ಚುನಾವಣೆಗಳು ಘೋಷಣೆಯಾದಾಗ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಗೋಖಲೆ ಸಂಸ್ಥೆಗೆ ಬಂದು ತಾವು ಮಾಡಿದ ಸಾಧನೆಗಳ ಬಗ್ಗೆ, ತಮ್ಮ ವಿಚಾರಗಳ ಬಗ್ಗೆ ಸಾರ್ವಜನಿಕ ಭಾಷಣವನ್ನು ಮಾಡಬೇಕಿತ್ತಂತೆ. ಅಲ್ಲಿ ಆಡಿದ ಮಾತುಗಳನ್ನು ಆರಿಸಿ ಬಂದ ನಂತರ ಪದೇ ಪದೇ ನೆನಪಿಸುವ ಕಾರ್ಯವನ್ನು ಇವರು ಮಾಡುತ್ತಿದ್ದರಂತೆ. ಇಷ್ಟೆ ಅಲ್ಲ.ಇವರ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವಾ್ಯವ ಅಭಿವೃದಿಖ ಕಾರ್ಯಗಳಾಗಬೆಕು ಎಂಬುದನ್ನು ಸ್ವತಃ ಸರ್ವೆ ನಡೆಸಿ ಪಾಲಿಕೆಗೆ ಅಂಕಿ ಅಂಶ, ಪಾಲಿಕೆಯ ನೀತಿ ನಿಯಮಾವಳಿಗಳ ಉಲ್ಲೇಖದ ಸಮೇತ ಪತ್ರ ಬರೆದು ತಿಳಿಸುತ್ತಿದ್ದರಂತೆ!
ಹೇಳುತ್ತಾ ಹೋದರೆ ಈ ಪುಣ್ಯಾತ್ಮನ ಬಗ್ಗೆ ಹೇಳಲು ಸಾವಿರ ಸಂಗತಿಗಳಿವೆ. ಪ್ರತಿಯೊಂದು ಕ್ಷಣದಲ್ಲೂ ಮಾದರಿಯಾಗಿ ಇವರು ಕಾಣುತ್ತಾರೆ. ಹತ್ತರ ಜೊತೆ ಹನ್ನೊಂದನೆಯವನಾಗುವುದಕ್ಕಿಂತ ಬದುಕಿನ ಸಾರ್ಥಕತೆಗೆ ಬೇರೆಯದೇ ದಾರಿಯನ್ನು ಹುಡುಕುತ್ತಿದ್ದರೆ ಈ ಅಜ್ಜ ನೆಟ್ಟ ಆಲದ ಮರಕ್ಕೆ ಖಂಡಿತವಾಗಿ ಉರುಳು ಹಾಕಿಕೊಳ್ಳಬೇಕು. ಅವರ ವಿಚಾರಗಳನ್ನು ಓದಬೇಕು... ನಮಿಸಬೇಕು ಆ ವಿಚಿತ್ರಕೆ......
-ನಾಗರಾಜ ವೈದ್ಯ

2 comments:

  1. ಎನ್ವಿ, ಅಂತು ಡಿ.ವಿ.ಜಿ ಬಗ್ಗೆ ಸ್ವಲ್ಪ ಓದಿದಿಯ ಅಂತ ಆಯ್ತು. ತುಂಬಾ ಒಳ್ಳೆಯ ಬೆಳವಣಿಗೆ. ಆದರೆ ಇನ್ನೂ ಓದಬೇಕು. ಹೊಸದಿಗಂತಕ್ಕೆ ಬರೆದ ಲೇಖನ ಇನ್ನೂ ಚೆನ್ನಾಗಿತ್ತು. ಏನೇ ಇರಲಿ ಒಳ್ಳೆತ್ಯ ಪ್ರಯತ್ನ. ನಿನ್ನಿಂದ ಇನ್ನೂ ಪ್ರಬುದ್ಧ ಲೇಖನಗಳನ್ನು ನಿರೀಕ್ಷೆ ಮಾಡ್ತೀನಿ. ಗುಡ್ ಲಕ್

    ReplyDelete
  2. ಉತ್ತಮ ಬರಹ .
    ವ೦ದನೆಗಳು.

    ReplyDelete