Sunday, March 21, 2010

‘ಶುಂಠಿ ’ ಬೆಳೆದವರಿಗೂ ಅಜೀರ್ಣವಾಗದು !

ಶುಂಠಿಯನ್ನು ಬೆಳೆದು ಬದುಕನ್ನು ಹಸನಾಗಿಸಿಕೊಳ್ಳಬಹುದೆಂಬುದೇ ಎಷ್ಟೋ ರೈತರಿಗೆ ಗೊತ್ತಿಲ್ಲ.ತಮ್ಮ ಅಲ್ಪ ಜಾಗದಲ್ಲಿಯೇ ಶ್ರದ್ಧೆ ಹಾಗೂ ಬುದ್ದಿವಂತಿಕೆಯಿಂದ ಶುಂಠಿಯನ್ನು ಬೆಳೆದರೆ ಬೆಳೆಗಾರನಿಗೂ ಅಜೀರ್ಣವಾಗುವುದಿಲ್ಲ!
ಹೌದು.ವಿಶ್ವದ ಪ್ರತಿಶತ 50ಭಾಗ ಶುಂಠಿಯನ್ನು ಭಾರತವೊಂದರಲ್ಲಿಯೇ ಬೆಳೆಯಲಾಗುತ್ತದೆ.ಅದರಲ್ಲೂ ಕೇಳದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತಾದರೂ ಈವರ್ಷದ ಅನಾವೃಷ್ಠಿ ಅಲ್ಲಿಯ ಶುಂಠಿಯ ಇಳುವರಿಯನ್ನು ತಗ್ಗಿಸಿದೆ. ಹಾಗಾಗಿ ಇಂದು ವಿಶ್ವ ಮಾರುಕಟ್ಟೆಯಲ್ಲಿ ಇರುವ ಬೇಡಿಕೆಯಷ್ಟು ಶುಂಠಿಯನ್ನು ಉತ್ಪಾದಿಸಬೇಕಾಗಿದೆ.ತನ್ನಿಮಿತ್ತ ಬೆಳೆದವರಿಗೆ ಉತ್ತಮ ಬೆಲೆಯೂ ಸಿಗಲಿದೆ.ಅಮೇರಿಕಾ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್, ಸೌದಿ ಅರೆಬಿಯಾ, ಕೆನಡಾ ಮೊದಲಾದ ದೇಶಗಳಿಗೆ ಇಲ್ಲಿಂದಲೇ ಶುಂಠಿ ಇಲ್ಲಿಯ ರೈತರ ಕನಸು ಕೊನರಲಿದೆ.
ಅಧಿಕ ಇಳುವರಿಯನ್ನು ಪಡೆಯುವುದರ ಜೊತೆಯಲ್ಲಿ ರೋಗ ನಿರೋಧಕ ಮತ್ತು ಹೊರ ದೇಶದ ತಳಿಗಳನ್ನು ತಂದು ಇಲ್ಲಿ ಅಭಿವೃದಿಖಪಡಿಸುವ ಕಾರ್ಯದಲ್ಲಿ ಕೃಷಿ ವಿಜ್ಞಾನಿಗಳು ಕಾರ್ಯಪ್ರವೃತ್ತವಾಗಿದ್ದಾರೆ.ಇಲ್ಲಿಯ ರೈತರ ಹೊಲದಲ್ಲಿ ವಿವಿಧ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆದು ಗೆಲುವಿನ ನಗುವನ್ನೂ ಬೀರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶನದಂತೆ ದಾಸನಕೊಪ್ಪದ ರೈತರೊಬ್ಬರ ಹೊಲದಲ್ಲಿ ಬೆಳೆದ ಶುಂಠಿ ನಿರೀಕ್ಷೆಗಿಂತ ಜಾಸ್ತಿ ಇಳುವರಿಯನ್ನು ನೀಡುವ ಮೂಲಕ ಇತರ ರೈತರ ಗಮನವೂ ಶುಂಠಿಯ ಕಡೆಗೆ ಹೊರಳುವಂತೆ ಮಾಡಿದೆ.
ಎಲ್ಲೆಲ್ಲಿ...ಹೇಗೆ... :
ಮಲೆನಾಡಿನ ಪ್ರದೇಶವು ಶುಂಠಿಬೆಳೆಯಲು ಹೇಳಿ ಮಾಡಿಸಿದ ಜಾಗವೆನ್ನುತ್ತಾರೆ ಕೃಷಿ ತಜ್ಞರು. ಉತ್ತಮ ಬಸಿಗಾಲುವೆ ಇರುವ ಮರಳು ಮಿಶ್ರಿತ ಕೆಂಪುಗೋಡು, ಜೇಡಿ ಮಿಶ್ರಿತ ಗೋಡು, ಕಪ್ಪು ಗೋಡು, ಮಣ್ಣಿಗಿಂತ ಹುಡಿ ಹುಡಿಯಾಗಿರುವ ಅಧಿಕ ಸಾವಯವ ಅಂಶ ಹೊಂದಿರುವ ಗೋಡು ಮಣ್ಣು ಉತ್ತಮ.ಬೆಚ್ಚಗಿನ ಆರ್ಧ್ರ ಹವಾಗುಣದಲ್ಲಿ ಳುವರಿ ಅಧಿಕ .
ಪೆಬ್ರವರಿ ತಿಂಗಳ ಮಧ್ಯ ಭಾಗದಿಂದ ಮಾರ್ಚ್ ತಿಂಗಳ ಮಧ್ಯ ಭಾಗದ ವರೆಗೆ ಬಿತ್ತನೆ ಮಾಡುವ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದು. ನೈರುತ್ಯ ಮಾರುತವು ಶುರುವಾಗುವುದಕ್ಕೂ ಮುಂಚೆ ಅಂದರೆ ಎಪ್ರಿಲ್ ಮೇ ತಿಂಗಳಿನಲ್ಲಿ ನಾಟಿ ಮಾಡಿದರೆ ನೀರಾವರಿ ಸೌಲಭ್ಯವಿರುವ ಸ್ಥಳಗಳಲ್ಲಿ ಉತ್ತಮ ಬೆಳೆಯನ್ನು ಪಡೆಯ್ಡಹುದು.
ಶುಂಠಿಯನ್ನು ಬೆಳೆಯುವಾಗ ಪೋಷಕಾಂಶಗಳು ಕೊರತೆಯಾಗದಂತೆ ನೋಡಿಕೊಂಡರೆ ಉತ್ತಮ ಪ್ರತಿಫಲವನ್ನು ಪಡೆಯ್ಡಹುದು.ಅಧಿಕ ಪೋಷಕಾಂಶಗಳ ಬಳಕೆ ಹಾಗೂ ಬೆಳೆ ಹೊದಿಕೆಗಳು ಸಸ್ಯದ ತೃಪ್ತಿದಾಯಕ ಬೆಳವಣಿಗೆಗೆ ಪ್ರಮುಖವಾಗಿದೆ.ಸಾರಜನಕದ ಸಲುವಾಗಿ ಪ್ರತೀ ಲೀಟರ್ ನೀರಿಗೆ 2 ಗ್ರಾಂ ಯೂರಿಯಾವನ್ನು ಬೆರೆಸಿ ಗಿಡಗಳಿಗೆ ಸಿಂಪರಣೆಯನ್ನು ಮಾಡಬೇಕು.ಬೇರುಗಳ ಬೆಳವಣಿಗೆಗಾಗಿ ಶಿಲಾರಂಜಕವನ್ನು ಶಿಪಾರಸ್ಸು ಮಾಡಿದ ಪ್ರಮಾಣಕ್ಕನುಗುಣವಾಗಿ ಕೊಟ್ಟಿಗೆ ಗೊ್ಡ್ಬರದೊಂದಿಗೆ ಮಿಶ್ರಣ ಮಾಡಿ ಬಳಕೆ ಮಾಡಬೇಕು.ಪೊಟ್ಯಾಷಿಯಂ ಕೂಡ ಅಗತ್ಯವಾಗಿದೆ.
ಈ ಎಲ್ಲ ಪೋಷಕಾಂಶಗಳನ್ನು ವಿವಿಧ ಹಂತಗಳಲ್ಲಿ ನೀಡಬೇಕಾಗುವುದು.
ರೋಗ ಭೀತಿಗೆ ಬೀಜೋಪಚಾರದ ಸಮಾಧಾನ..:
ಶುಂಠಿ ಸೂಕ್ಷ್ಮಬೆಳೆ.ಇಲ್ಲಿ ರೋಗಭಾದೆ, ಕೀಟಭಾದೆಗಳು ಹೆಚು?.ಇದಕ್ಕೆ ಪರಿಹಾರವಾಗಿ ವಿಜ್ಞಾನಿಗಳು ಸರಳವಾಗಿ ಬೀಜೋಪಚಾರ ಮಾಡುವ ಕ್ರಮವನ್ನೂ ಹೇಳಿಕೊಟ್ಟಿದಾ್ದರೆ.ಕಾಂಡಕೊರಕ, ಎಲೆಸುರುಳಿ ಕೀಟ, ಬೇರು ಕಾಂಡ ಶಲ್ಕ ಕೀಟ, ನುಸಿ ಪೀಡೆ ಇವಿಷ್ಟು ಬಾಹ್ಯವಾಗಿ ಅಂಟಿಕೊಂಡರೆ, ಮೆದುಕೊಳೆ ರೋಗ, ಎಲೆಚುಕ್ಕೇ ರೋಗ, ಎಲೆ ಚುಕ್ಕೆರೋಗ, ಅಂಗಮಾರಿ ರೋಗ, ದಂಡಾಣು ರೋಗ, ಮುಂತಾದವು ಗಳು ಇಳುವರಿಯನ್ನು ಹಾಳುಗೆಡವುತ್ತದೆ.ಈ ಪ್ರತಿಯೊಂದು ರೋಗಕ್ಕೂ ಬೀಜೋಪಚಾರ ಹಾಗೂ ವಿವಿಧ ಔಷಧ ಸಿಂಪರಣೆಯನ್ನು ಕೈಗೊಳ್ಳಬೇಕು.ಈ ಕುರಿತಾಗಿ ಕೃಷಿ ತಜ್ಞರ ಮಾಹಿತಿಪಡೆಯುವುದೊಳ್ಳೆಯದು.ಬೇವಿನ ಹಿಂಡಿಯನ್ನು ಹಕ್ಟೇರಿಗೆ 8.0 ಕ್ವಿಂ. ಪ್ರಮಾಣದಲ್ಲಿ ನೀಡುವುದರಿಂದ ಗಡ್ಡೆಕೊಳೆ ರೋಗವನ್ನು ದೂರವಿಡ್ಡಹುದು.
ಇಷ್ಟೆಲ್ಲಾ ಹಂತಗಳನ್ನು ದಾಟಿದ ಮೇಲೆ ಫಸಲನ್ನು ಪಡೆಯಲು 8 ತಿಂಗಳು ಕಾಯಬೇಕು.ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಅಥವಾ ತುದಿಯಿಂದ ಒಣಗಳು ಶುರುವಾದಾಗ ಕೊಯ್ಲು ಮಾಡಬೇಕು. ಬಳಸಿದ ತಳಿ, ಬೇಸಾಯದ ಹಕ್ಟೇರಿಗೆ 20 ರಿಂದ 25 ಕ್ವಿಂ ಬೇರುಗಡ್ಡೆಗಳು ಸಿಗುತ್ತದೆ. ಸಾಲ ಮಾಡಿ ಬೆಳೆದವರಿಗೇ ತೀರಿಸುವುದು ಅಷ್ಟೇನೂ ಕಷ್ಟವಾಗಲಾರದು ಎಂದು ಅನುಭವಸ್ಥ ರೈತರ ಅಭಿಪ್ರಾಯಿಸುತ್ತಾರೆ.

--------- ಶಿಫಾರಸ್ಸು ಮಾಡಿದ ತಳಿಗಳು
ಇಲ್ಲಿಯ ಹವಾಗುಣಕ್ಕನುಗುಣವಾಗಿ ವೈನಾ? ಮನಂಥಾಡಿ, ಮಾರ?, ರಿಯೋ ಡಿ ಜೆನಿರೋ, ಚೈನಾ, ಹಿಮಗಿರಿ, ವರದಾ, ರೆಜತ, ಮಹಿಮ, ಹಿಮಾಚಲ ತಳಿಗಳನ್ನು ವಿಜ್ಞಾನಿಗಳು ಶಿಫಾರಸ್ಸು ಮಾಡುತಾ್ತರೆ. ಪಾ್ರದೇಶಿಕ ಹವಾಗುಣ ಹಾಗೂ ಮಣ್ಣಿನ ಸ್ವಭಾವಗಳಿಗನುಗುಣವಾಗಿ ಬೇರೆ ಬೇರೆ ತಳಿಗಳನ್ನು ್ಡಳಸ್ಡಹುದು.
--------
ಮೊದಲಿಗಿಂತ ಮಾನ ಹೆಚ್ಚು!
ಶುಂಠಿಯ ವೌಲ್ಯವರ್ಧನೆ ಮಾಡಿ ಮಾರುಕಟ್ಟೆಯನ್ನು ಮಾಡುವ ಕ್ರಮಗಳು ಈಗ ಜನಪ್ರಿಯವಾಗುತ್ತಿದೆ.ಒಣಗಿಸಿದ ಶುಂಠಿ, ಬ್ಲೀಚ್ ಮಾಡಿದ ಶುಂಠಿ, ಶುಂಠಿಯ ಕ್ಯಾಂಡಿ, ಶುಂಠಿಯ ಪಾನೀಯ, ಶುಂಠಿ ಚಾಟ್,ಒಣ ಶುಂಠಿ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸುಂಠಿ ಕಷಾಯಪುಡಿ ಇವೇ ಮೊದಲಾದ ಸಿದಖ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿದ್ದರೆ ಬೆಳೆದವರ ಜೇಬು ತುಂಬುತ್ತಿದೆ.
-- ನಾಗಾರಾಜ. ವೈದ್ಯ

No comments:

Post a Comment