Saturday, March 20, 2010

ಸಾತ್ವಿಕ ಅಸಹನೆಯಲ್ಲಿ ಪೊಣಿಸಿದ ಕಾವ್ಯಗುಚ್ಛ 'ದ್ರೌಪದಿ ಬಿಚ್ಚಿದ ತುರುಬುಗಳು'

‘ನಾನು ಸಾಹಿತಿಯಲ್ಲ . ಸಾಹಿತ್ಯದವಿದ್ಯಾಥಿ೵ಯೂ ಅಲ್ಲ. ಕಾವ್ಯ ಕುತೂಹಲಿ ಅಷ್ಟೇ, ಒಳ್ಳೆಯ ಕ್ರತಿಗಳನ್ನೋದಿದಾಗಲೆಲ್ಲಾ ಮನಸ್ಸು ಸಂಭ್ರಮಿಸುತ್ತದೆ’ ಎನ್ನುತ್ತಲೇ ತಣ್ಣಗೆ ಕಾವ್ಯ ಕೃಷಿಯನ್ನು ಮಾಡುತ್ತಿರುವ ಮಲೆನಾಡಿನ ಕವಿ ಸುಬ್ರಾಯ ಮತ್ತಿಹಳ್ಳಿಯವರು ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇಷ್ಟು ವರ್ಷಗಳ ಕಾಲ ಕವಿತೆಗಳನ್ನ ಬರೆಯುತ್ತಾ , ಆಕಾಶವಾಣಿಯಲ್ಲಿ, ಯಾವುದಾದರೂ ಸಾಹಿತ್ಯ ಗೋಷ್ಠಿಗಳು ನಡೆದಲ್ಲಿ ಅವುಗಳನ್ನು ಓದುತ್ತಾ ತನ್ನ ಪಾಡಿಗೆ ತಾನಿರುತ್ತದ್ದ ಈ ಕವಿ ಕಳೆದೆರಡು ದಶಕಗಳಲ್ಲಿ ಬರೆದ ಕವಿತೆಗಳ ಪ್ರಾತಿನಿಧಿಕ ನಲವತ್ನಾಲ್ಕು ಕವಿತೆಗಳನ್ನು ಒಟ್ಟುಗೂಡಿಸಿ ‘ ದ್ರೌಪದಿ ಬಿಚ್ಚಿದ ತುರುಬುಗಳು’ ಎಂಬ ಸಂಕಲನವನ್ನು ಹೊರತಂದಿದ್ದಾರೆ. ನಿತ್ಯ ಜೀವನದ ಅನುಭವದ ಸತ್ಯಗಳನ್ನೇ ಕವಿತೆಯಾಗಿಸುವ ಜೊತೆಯಲ್ಲಿ ಜೀವನದ ಕುರಿತಾಗಿ ಹೊಸ ನೋಟವನ್ನು ಮೂಡಿಸುವ ಇವರ ಶೈಲಿ ಅಪರೂಪವಾದದ್ದು . ಭಾಷೆಯ ಬಳಕೆಯಲ್ಲೂ ಮನೆ, ತಾನು ವಾಸಿಸುವ ಪರಿಸರ ಮತ್ತು ತನ್ನವರು ಕಂಡ ಜಾನಪದವನ್ನು ದೂರವಿರಿಸಿದವರಲ್ಲ. ಹಾಗಾಗಿ ತೀರಾ ಆಪ್ತವಾಗಿ ಇವರ ಕವಿತೆಗಳನ್ನು ಆಸ್ವಾಧಿಸಬಹುದಾಗಿದೆ. ಈ ಹಳ್ಳಿಮನೆಯ ರಸಾನುಭವ ಲೋಕದ ಕಣ್ಣಿನ ಜೊತೆ ಸಂವಹನಕ್ಕಿಳಿಯುವ ಪರಿಯನ್ನು ನೋಡಿ,
ದಪ ದಪ ಸುರಿದ ಮಳೆ ಈಗಾ್ಮತ್ರ ನಿಂತಿದ್ದು
ತಟ ಪಟ ಮರದ ಹನಿ ನೆನಪಿನ ಗೂಡ ಕೆಣಕಿದ್ದು
ತಟವಟ ಎಂಬಾ ಮನಸು ಅಂಬಾರಕೆ ದೃಷ್ಟಿ
ನೆಟ್ಟಿದ್ದು ತಾವರೆ ಎಲೆ ನೀರಿನ ಮಣಿಯಾ ಪೋಣಿಸಲೇ ಹಣಕಿದ್ದು
ಎಂಥವರ ಎದುರಲ್ಲಾದರೂ ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ...ಓದೆಲ್ಲಾ ಮುಗಿದಾಮೇಲೆ ಸಾಲೊಂದು ಕಾಡಿದೆ!
ಹೀಗೆ ಅನುಭವವನ್ನು ಕವಿತೆಯಾಗಿಸುವ ಸುಬ್ರಾಯ ಮತ್ತಿಹಳ್ಳಿಯವರ ಕವಿತೆಗಳು ಬರೇ ಇಷ್ಟೇ ಅಲ್ಲ. ಇದರಾಚೆಗೂ ಅವರದ್ದೇ ಆದ ನಿಲುವುಗಳಿವೆ. ‘ಕಣ್ಣಿಗೆ ಕಂಡ ತಥ್ಯಗಳನ್ನಷ್ಟೇ ಹೇಳುವುದು ಕವಿತೆಯಲ್ಲ. ಬದುಕಿನ ಏರು ಇಳಿವು, ನೋವು ತಲ್ಲಣ, ಖಿನ್ನತೆ , ಖುಷಿಯ ಸಂದರ್ಭದಲ್ಲಿ ಮನಸ್ಸು ಕಲಕುತ್ತದೆ.ಅದು ಎಲ್ಲರದ್ದೂ ಕೂಡಾ. ಅಂಥ ಸಂಚಲನದ ಸಂದರ್ಭದಲ್ಲಿ ಭಾವ ತೀವ್ರತೆಗೆ ಭಾಷಾ ಪೋಷಾಕು ತೊಡಿಸಲು ಪ್ರಯತ್ನಿಸಿದ ಗುರುತುಗಳೇ ಕವನಗಳು ಎಂದು ತಿಳಿದಿದ್ದೇನೆ ’
ತೀರಾ ಭಿನ್ನ ನೆಲೆಯಲ್ಲಿ ಬದುಕಿನ ಗ್ರಹಿಕೆಯನ್ನು ಕವಿತೆಯಾಗಿಸುತ್ತಾರೆ ಎಂಬುದೇ ಇವರ ಕವಿತೆಗಳಿಗಿರುವ ವಿಶೇಷತೆ. ನವೋದಯ ಕಾಲದ ಗೇಯತೆ ಇವರ ಕವಿತೆಗಳ ಹತ್ತಿರದ ಸಂಬಂಧಿ. ಆಕಾಶವಾಣಿ ಇವರ ಅನೇಕ ರಚನೆಗಳನ್ನು ಹಾಡಿದೆ.ಸಂಕಲನದಲ್ಲಿರುವ ಒಂದೊಂದು ಕವಿತೆಯನ್ನು ಓದಿದಾಗಲೂ ಅವರ ನಿಲವು ಒಲವುಗಳ ಲೆಕ್ಕಾಚಾರ ಸ್ಪಷ್ಟವಾಗುತ್ತಾ ಹೋಗುತ್ತವೆ. ಪುಸ್ತಕಕ್ಕೆ ಸಹ ಸ್ಪಂದನವನ್ನು ಬರೆದ ವಿಮರ್ಶಕ ಆರ್‌ ಡಿ ಹೆಗಡೆ ಆಲ್ಮನೆಯವರು ‘ ಸುಬ್ರಾಯ ಮತ್ತಿಹಳ್ಳಿಯವರು ಇಂದಿನ ಸತ್ಯವನ್ನು ಅದಕ್ಕೆ ತಕ್ಕಸಂವೇದನೆಯನ್ನು ಕೂಡಿಸಿಕೊಂಡು - ಭಾಷೆಯಲ್ಲಿ ಎಷ್ಟು ಮೈದಾಳಬಲ್ಲದೋ ಅಷ್ಟನ್ನು ಮಾತ್ರ ಸಾತ್ವಿಕ ಅಸಹನೆಯಲ್ಲಿ ಪದ್ಯವಾಗಿಸುವ ಪರಿ ನಿಜವಾಗಿಯೂ ಜನೋಪಯೋಗಿ ಭಾವಾಭಿವ್ಯಕ್ತಿ’’ ಎಂದು ಹೇಳುತ್ತಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ತಾವು ಬರೆದ ಕಾವ್ಯಗಳನ್ನು ವಾಚಿಸುವುದರಲ್ಲಿಯೇ ಸಂತ್ರಪ್ತಿಯನ್ನು ಕಾಣುತ್ತಿದ್ದ ಮತ್ತಿಹಳ್ಳಿಯವರು ಈಗ ಗುಚ್ಛವನ್ನು ಕಟ್ಟಿ ಓದುಗರ ಕೈಗಿರಿಸಿದ್ದಾಋಎ.. ಇದರಿಂದಾಗಿ ಓದುಗರಿಗೆ ಒಂದೇ ಗುಕ್ಕಿನಲ್ಲಿ ಸಿಗದ ಪದ್ಯಗಳ ಸನ್ನಿಧಿ ಓದಿನಲ್ಲಿ ಸಿಗಲಿದೆ. ಸಂಕಲನದಲ್ಲಿ ಗಮನಿಸಬೇಕಾದ ಕವಿತೆಗಳೆಂದರೆ ‘ ಸಹನೌಭುನಕ್ತು’ ಹವ್ಯಕ ಆಡು ಭಾಷೆಯ ಹೊರ ಸೌಂದರ್ಯದಲ್ಲಿ ಸಾಮಾಜಿಕ ಬದಲಾವಣೆಗಳ ಸೂಕ್ಷ್ಮವನ್ನು ತೆಗೆದಿರಿಸುವ ಪ್ರಯತ್ನ ಉತ್ತಮವಾಗಿದೆ.
ಜಾತಿ ಜಾತಿಗೆ ಬಿರುಕಿದ್ರೇನೂ ಒಳ್ಗೆ ಗಾಳ್ಯಾಡ್ತಿತ್ತು
ಕಷ್ಟ ಸುಖಕ್ಕೆ ಆಪಸ್ನಾತೆ ಸಂಬಂಧ್‌ ಹೆಣ್ಕಂಡಿತ್ತು
------
ಹೊಸ ಕಾಲ ನುಗ್ಗೇ ಬಿಡ್ತು ಹಿತ್ಲ ಬಾಗ್ಲಲ್ಲಿ
ತನ್ನಿಂತಾನೇ ಬೇರು ಬಿಡ್ತು ಕತ್ಲ ಮೂಲೇಲಿ
ಮುಂತಾದ ಸಾಲುಗಳ ಮೂಲಕ ಸಾಮಾಜಿಕ ಬದಲಾವಣೆಯ ಸೂಕ್ಷ್ಮಗಳನ್ನು , ಬದಲಾವಣೆಗಳನ್ನು ಹೇಳುತಾ್ತರೆ. ಅಲ್ಲಲ್ಲಿ ಈ ಬದಲಾವಣೆಗಳ ಬಗೆಗಿನ ಅಸಮಾಧಾನವೂ ಹೊರಬೀಳುತ್ತದೆ. ಸಂಕಲನದ ಶೀರ್ಷಿಕೆ ಕವಿತೆ ಯಾದ ದೌ್ರಪದಿ ಬಿಚ್ಚಿದ ತುರುಬುಗಳು ಕೂಡ ಸಾತ್ವಿಕ ಅಸಹನೆಯ ರೂಪಕವೇ ! ಇವತ್ತು ಪ್ರಕೃತಿ ತನ್ನ ಆಕೃತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭವನ್ನು ಕವಿ ದಾ್ವಪರ ಯುಗಕ್ಕೆ ಕೊಂಡೊಯ್ದು ಅಲ್ಲಿ ತುರುಬು ಕಟ್ಟಿ ಮಾಡಿದ ಶಪಥವನ್ನು ನೆನಪಿಸಿಕೊಳ್ಳುತಾ್ತ ಉಳಿದ ಮರಗಳು ದೌ್ರಪದಿ ಬಿಚ್ಚಿದ ತುರುಬುಗಳು ಎಂದು ಹೇಳುತಾ್ತರೆ.ಇದೇ ರೀತಿಯಲ್ಲಿ ಭಕ್ಷಗಾನ, ಸಾವಯವ , ವರ್ತಮಾನ , ವಾಸ್ತವ, ಒಂದೇ ಗುಡಿ-ಒಂದುಗೂಡಿ,ಹಬ್ಬಕೊ್ಕಂದು ಶಬ್ಧವೇದಿ ಇವೇ ವೊದಲಾದ ಕವಿತೆಗಳು ಇದೇ ಸ್ವಭಾವದಿಂದ ಗಮನ ಸೆಳೆಯುತ್ತವೆ. ಆದರೂ ಎಲ್ಲಿಯೂ ಏಕತಾನತೆ ಸೃಷ್ಟಿಯಾಗುವುದಿಲ್ಲವೆಂಬುದು ವಿಶೇಷ.ಅಷಾಡದ ಹನಿಗಳು, ಮಣ್ಣು ಮೆತ್ತಿದ ಹಾಡು, ಮಳೆ ಹನಿಗಳು ಇವೇ ವೊದಲಾದವು ನೆಲದ ಪ್ರೀತಿಯನ್ನು ಹೇಳುತ್ತ ಸೊಬಗನ್ನು ಅನಾವರಣ ಗೊಳಿಸುತ್ತವೆ. ‘ಈ ಸಂಕಲನದ ಎಲ್ಲ ಕವಿತೆಗಳೂ ಒಂದಲ್ಲ ಒಂದು ತುರ್ತಿನಲ್ಲಿರುವುದರಿಂದ ತನ್ನ ಪದ್ಯಗಳ ಮಿತಿಯನ್ನು ಒಪ್ಪಿಕೊಂಡೇ ಇವರು ಬರೆಯುತಾ್ತರೆ. ಸಂಕಲನದಲ್ಲಿರುವ ಈ ಚೆಹರೆಯ ಕವನಗಳು ಹೆಚ್ಚಿನ ಸಂಖ್ಯೆಯ ಓದುಗರಿಗೆ ಸಾರ್ಥಕವೆನ್ನಿಸಿ ಪದ್ಯ ಪ್ರಕಾರದ ಬಗೆಗೆ ಆಕರ್ಷಣೆಯನ್ನು ಒಡ್ಡುತ್ತದೆ.ಓದುಗನ ಪ್ರಜ್ಞೆಯನ್ನು ಬೆಂಬಲಿಸುವ ಈ ಪದ್ಯಗಳನ್ನು ವಿವರವಾಗಿ ಗಮನಿಸಬೇಕೆನ್ನಿಸುತ್ತೆ’ ಎನ್ನುವ ಆಲ್ಮನೆಯವರ ಮಾತುಗಳು ಇಲ್ಲಿ ನಿಜವೆನಿಸುತ್ತದೆ.
- ನಾಗರಾಜ ವೈದ್ಯ

No comments:

Post a Comment