'...ಎರಡು ಜಡೆಗಳನ್ನು ಮಾತ್ರ ಒಂದೆಡೆ ಸೇರಿಸಲಾಗದು.' ತುಂಬಾ ಹಿಂದಿನಿಂದ ಹೆಣ್ಮಕ್ಕಳ ಕುರಿತು ಕೇಳಿಬರುತ್ತಿರುವ ಮಾತು ಇದು.ಸ್ತ್ರೀಯರಿಬ್ಬರು ಮಾತಾಡಲು ಕುಂತರೆ ಅಲ್ಲಿ ಒಮ್ಮತದ ಅಭಿಪ್ರಾಯ ಮೂಡಲಿಕ್ಕೆ ಸಾದ್ಯವೇ ಇಲ್ಲ.ಅಲ್ಲಿ ಅಸಮಧಾನ ಹುಟ್ಟುತ್ತದೆ.
ಜಗಳಕ್ಕೆ ಸಾವಿರ ದಾರಿಗಳು ತೆರೆದುಕೊಳ್ಳುತ್ತವೆ.ಶುರುವಾಗುತ್ತದೆ ವೈರ... ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತದೆಂದರೆ ಮನೆ ಮುರಿಯುತ್ತದೆ.ಮನಸ್ಸಿನ ನಡುವೆ ಒಡೆಯಲಾಗದ ಗೋಡೆ... ಇವತ್ತಿನ ವಿಭಕ್ತ ಕುಟುಂಬಗಳ ಹುಟ್ಟಿನ ಕಾರಣಗಳನ್ನು ಹುಡುಕಿದರೆ ಸಿಗುವ ಪ್ರಮುಖ ಅಂಶಗಳಿವು.ಆದರೆ ಶಿರಸಿ ಸಮೀಪದ ಕೊಪ್ಪಲಗದ್ದೆಯ ಗೌಡರ ಮನೆ ಹೊಕ್ಕರೆ ನಮ್ಮ ಅಭಿಪ್ರಾಯಗಳೇ ಬದಲಾಗುತ್ತದೆ.ಎರಡಲ್ಲ,ಹದಿನೈದಕ್ಕೂ ಹೆಚ್ಚಿನ ಹೆಣ್ಣು ಜೀವಗಳು ಸಾಮರಸ್ಯದಿಂದ ಜೀವನ ನಡೆಸುತ್ತಿರುವುದನ್ನು ಕಂಡು ಅರಿವಿಲ್ಲದೆಯೇ ಅಚ್ಚರಿಯ ಉದ್ಘಾರ ಹೊರಡುತ್ತದೆ.
ಹೌದು! ಇದು ಬರೇ ಅವಿಭಕ್ತ ಕುಟುಂಬದ ಕತೆಯಾದರೆ ಹೇಳುವ ಅಗತ್ಯವೇ ಇರಲಿಲ್ಲ.ಇಂದಿಗೂ ಮಲೆನಾಡಿನಲ್ಲಿ ಓಡಾಡಿದರೆ ಒಂದಾನೊಂದು ಕಾಲದ ಪಳಯುಳಿಕೆಯಂತೆ ಅಲ್ಲೊಂದು,ಇಲ್ಲೊಂದು ಅವಿಭಕ್ತ ಕುಟುಂಬಗಳು ಸಿಗುತ್ತವೆ.ಆದರೆ ಅಲ್ಲಿಯ ಹೊಂದಾಣಿಕೆಯ ಕುರಿತಾಗಿ ಅಷ್ಟು ಪ್ರಬಲವಾಗಿ ಪ್ರತಿಪಾದಿಸಲಾಗದು.ಕೆಲವೊಮ್ಮೆ ಸಣ್ಣ ಸಣ್ಣ ಸಂಗತಿಗಳೂ ಮನೆ ಮುರಿಯುವ ಕಾರಣವಾಗಿಬಿಡುವುದುಂಟು.ಆದರೆ ಕೊಪ್ಪಲಗದ್ದೆಯ ಕರಿಯಾ ಗೌಡರ ಕುಟುಂಬಸ್ತರು ಮಾತ್ರ ಇದೆಲ್ಲದಕ್ಕೆ ಅಪವಾದವೆನ್ನುವ ರೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಮೂರು ಪ್ರತ್ಯೇಕ ಕುಟುಂಬಗಳ 39 ಜನರು ಒಂದಾನೊಂದು ಕಾಲದ ರೂಢಿಯಂತೆ ಒಟ್ಟಾಗಿ ಬದುಕುತ್ತಿದ್ದಾರೆ.ಒಂದೇ ಒಂದು ದಿನವೂ ಯಾವುದೇ ಭಿನ್ನಾಭಿಪ್ರಾಯಕ್ಕೆ ಸಿಕ್ಕಿಕೊಳ್ಳದೆಯೇ ಕೂಡು ಕುಟುಂಬದಲ್ಲೂ ನೆಮ್ಮದಿಯಿದೆ ಎಂಬುದನ್ನು ನವ ನಾಗರೀಕತೆಗೆ ಸಾರಿಹೇಳುವ ಸರದಿಯಲ್ಲಿದೆ. ದಿನ ದಿನಕ್ಕೂ ಸಂಕೀರ್ಣವಾಗುತ್ತಿರುವ ಕುಟುಂಬದ ಕುರಿತಾಗಿನ ಸಾಮಾಜಿಕ ದೃಷ್ಠಿಕೋನಕ್ಕೆ ಸಡ್ಡು ಹೊಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಮನೆಗೆ ಸೊಸೆಯಂದಿರಾಗಿ ಬಂದ ಹೆಣ್ಮಕ್ಕಳು ಹೇಳುವ ಪ್ರಕಾರ 'ತವರಿನಲ್ಲಿ ಒಬ್ಬೊಬ್ಬರೇ ಇದ್ದು ಬೇಸರಬಂದುಹೋಗಿತ್ತು.ಇಲ್ಲಿ ಎಲ್ಲರೂ ಕೂಡಿ ಬದುಕುತ್ತಿರುವುದರಿಂದ ದಿನಕಳೆದದ್ದೇ ಗೊತ್ತಾಗುತ್ತಿಲ್ಲ...'
ಹಾಗೆ ನೋಡಿದರೆ ಇದು ವಿಭಕ್ತ ಕುಟುಂಬವೆನ್ನುವುದಕ್ಕೆ ಯಾವ ಪುರಾವೆಗಳೂ ಇಲ್ಲ.ಒಟ್ಟಿಗೆ ಮುಂಜಾನೆ ಏಳುವುದರಿಂದ ಹಿಡಿದು ಸಂಜೆವರೆಗಿನ ಪ್ರತಿಯೊಂದು ಕ್ಷಣವನ್ನೂ ಒಟ್ಟಿಗೆ ಕಳೆಯುತ್ತಾರೆ.ನೀ ನನಗಿದ್ದರೆ ನಾ ನಿನಗೆ... ಅಕ್ಷರಶಃ ನಿಜವಾಗಿದೆ ಈ ಮಾತು ಇಲ್ಲಿ. ಒಂದೇ ಮನೆಯ ಜನರಂತೆ ಇವರು ಬದುಕುತ್ತಿರುವುದಕ್ಕೋ ಎನೋ ಇಲ್ಲಿ ಪ್ರತಿಯೊಬ್ಬರಲ್ಲೂ ಅವಿನಾಭಾವ ಮೈತ್ರಿಯಿದೆ.ಹೊಂದಾಣಿಕೆಯಿದೆ.ನಾವು ಏನೇ ಮಾಡುವುದಿರಲಿ, ಕೂಡಿಕೊಂಡೇ ಮಾಡ್ತೀವಿ. ನಮಗೆ ಹೀಗೇ ಇರೋದು ತುಂಬಾನೇ ಇಷ್ಟ ಅನ್ನುತ್ತಾರೆ ಈ ಮನೆಯ ಮಕ್ಕಳ ಪೈಕಿ ಹಿರಿಯ ನಾರಾಯಣ ಗೌಡ.ಇದೇ ಮತಿಗೆ ತಮ್ಮಂದಿರೂ ಹ್ಞೂಂ ಗುಡುತ್ತಾರೆ.
ವ್ಯಾವಹಾರಿಕವಾಗಿ ಮೂರು ಮನೆಗಳಾಗಿವೆಯೇನೋ ನಿಜ.ಆದರೆ ಮನೆ ಮಾತ್ರ ಭಾಗವಾಗಿಲ್ಲ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಇವರು ತಮ್ಮೆಲ್ಲಾ ಕೆಲಸಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ. ಎಲ್ಲರ ಜಮೀನುಗಳಲ್ಲಿ ಎಲ್ಲರೂ ಶ್ರಮಿಸುತ್ತಾರೆ.ಒಂದೇ ಒಂದು ವರ್ಷವೂ ನಮ್ಮ ಕೆಲಸ ಆಳುಗಳಿಲ್ಲದೆಯೇ ಹಿಂದೆ ಉಳಿದದ್ದಿಲ್ಲ ಎನ್ನುವ ಮಾತು ಇವರದ್ದು.ಮನೆಯ ಅಷ್ಟೂ ಜನ ಹೊಲಕ್ಕಿಳಿದು ದುಡಿಯುತ್ತಾರೆ.ಗಂಡಿರಲೀ ಹೆಣ್ಣಿರಲಿ ತಮ್ಮ ಕೆಲಸವನ್ನು ತಾನು ಮಾಡುತ್ತ ನಿರಂತರವಾಗಿ ಮನೆಯ ನೆಮ್ಮದಿಯನ್ನು ಕಾಯ್ದುಕೊಂಡುಹೋಗುವ ಸಲುವಾಗಿ ಇವರೆಲ್ಲರ ಧ್ಯಾನ ! ಅದೇ ರೀತಿ ಖುಷಿಯಿಂದ ಇರುತ್ತಾರೆ.ಇಲ್ಲಿಯ ಉದ್ದಾನುದ್ದ ಪಡಸಾಲೆಯ ಮೇಲೆ ಮಧ್ಯಾಹ್ನವನ್ನು ಕಳೆಯುವುದೇ ಒಂದು ರೋಂಮಾಂಚಕ ಅನುಭವ. ಚಿಕ್ಕವರು,ದೊಡ್ಡವರು ಎಲ್ಲರೂ ಬಂದು ಟಿ,ವಿ.ಯ ಮುಂದೆ ಆಸೀನರಾದರೆ ಅಲ್ಲಿ ಹುಟ್ಟುವ ಮಾತುಗಳು ಸ್ವಾರಸ್ಯ ಕಳೆದುಕೊಂಡ ದಿನಗಳಿಲ್ಲ.ಏನಾದರೊಂದು ಹೊಸ ವಿಷಯದೊಂದಿಗೆ ಶುರೂವಾಗುವ ಮಾತುಗಳು ಸದಾ ಕುತೂಹಲವನ್ನು ಜತೆ ಜತೆಯಾಗಿಯೇ ಇಟ್ಟುಕೊಂಡೇ ಮುಂದುವರೆಯುತ್ತವೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಯ ಸೊಸೆಯಂದಿರನ್ನು ಮಾತನಾಡಿಸಬೇಕು.ಅತ್ತೆಯರ ಹಾದಿಯಲ್ಲಿ ನಡೆಯುತ್ತೀವಿ ಅನ್ನುತ್ತಾರೆ.ಅತ್ತೆಯಂದಿರು ಈ ಮನೆಗೆ ಕಾಲಿರಿಸಿ ಸುಮಾರಿಗೆ ಅರವತ್ತು ವರ್ಷಗಳೆ ಸಂದಿರಬೇಕು.ಇಲ್ಲೇ ದುಡಿದು, ದಣಿದು,ಬೆಳೆದು ಮಾಗಿದ ಜೀವಗಳವು.ಅವರ ಮಾತಿಗೆ ತಪ್ಪುವುದುಂಟೇ ಎನ್ನುತ್ತಾಳೆ ಈ ಮನೆಯ ಸೊಸೆ ಲಕ್ಷ್ಮಿ.ಯಾವುದೇ ಅಸಮಾಧಾನ ಉಂಟಾದರೂ ಇಲ್ಲಿ ಮಾತು,ಸಮಾಲೋಚನೆಗಳೇ ಅವನ್ನು ಬಗೆಹರಿಸುತ್ತವೆ.ಅತ್ತೆಸೊಸೆಯಂದಿರ ಮಧ್ಯೆ ಈ ನಂಬಿಕೆ ಬೆಳೆದ ಕಾರಣದಿಂದ ಲಾಗಾಯ್ತಿನಿಂದಲೂ ಇಲ್ಲಿ ಮಹಾ ಸಮರಗಳು ನಡೆದೇ ಇಲ್ಲ..ಇದು ಭಾರತಿ ತನ್ನ ಕುಟುಂಬವನ್ನು ತೆರೆದಿಡುವ ರೀತಿ.
ಇಂದಿನ ಸಮಾಜದಲ್ಲಿ ಅದರಲ್ಲೂ ಹೆಣ್ಣು ಹೆತ್ತವರಲ್ಲಿ ಸಾಮಾನ್ಯವಾಗಿ ಒಂದು ಗುಂಗೀ ಹುಳು ಕೊರೆಯುತ್ತಿರುತ್ತದೆ.ತನ್ನ ಮಗಳನ್ನು ಕೂಡುಕುಟುಂಬಕ್ಕೆ ಸೊಸೆಯಾಗಿ ಕಳುಹಿಸಿದರೆ ಅಲ್ಲಿ ಅವಳು ಕೆಲಸ ಮಾಡಿ ಮಾಡಿಯೇ ಸೊರಗುತ್ತಾಳೆ.ಅವಳನ್ನು ಒಬ್ಬನೇ ಮಗನಿರುವ ಕಡೆಗೆ ಸೊಸೆಯಾಗಿ ಕಳುಹಿಸಬೇಕು ಎಂಬ ವಿಚಾರಗಳಿರುತ್ತವೆ.ಹಾಗಾಗಿ ಅವಳ ಮದುವೆಯ ಪ್ರಸ್ತಾಪದ ಜೊತೆಯಲ್ಲಿಯೇ ಒಂದೇ ಮಗನಿರಬೇಕು,ತಂದೆ ಇದ್ದರೂ ಪರವಾಗಿಲ್ಲ,ತಾಯಿಯಿರಬಾರದು(!)ತಂದೆ ತಾಯಿ ಇಬ್ಬರೂ ಇದ್ದರೂ ಹೇಗಾದರೂ ಹೊಂದಿಕೊಳ್ಳಬಹುದು, ಆದರೆ ಅತ್ತಿಗೆಯಂದಿರು ಇದ್ದರೆಂದರೆ ತನ್ನ ಮಗಳನ್ನು ಅವರ ಮನೆಗೆ ಸೊಸೆಯಾಗಿ ಕಳಿಸೋದಿಲ್ಲ ಹೀಗೆ ನಾನಾ ಬಗೆಯ ನಿಬಂದನೆಗಳು ಶುರುವಾಗುತ್ತವೆ.ಇದೆಲ್ಲಾ ನಿಬಂದನೆಗಳು ಪೂರೈಸಿದಮೇಲೂ ಗಂಡು ಹಾಗೂ ಹೆಣ್ಣಿನ ನಡುವೆ ಸಂಭವಿಸುವ ಬಿರುಕಿನ ಬಗ್ಗೆ ಸಾವಿರದೆಂಟು ನಿರೂಪುಗಳು ಸಿಗುತ್ತವೆ.ಕೊಪ್ಪಲಗದ್ದೆಯ ಗೌಡರ ಮನೆಯ ಮದುವೆ ಸಂದರ್ಭಗಳಲ್ಲಿ ಇಂತಹ ಪರಿಸ್ತಿತಿ ಎದುರಾಗಿತ್ತೇ ಎಂದು ಕೇಳಿದರೆ ವಿನಾಯಕ ಗೌಡರು ಹೇಳುವ ಮಾತು.. ಇಷ್ಟು ಮದುವೆಯಾಯ್ತು ನಮ್ಮನೇಲಿ.. ಒಂದೇ ಒಂದು ಹೆಣ್ಣಿನ ತಂದೆ ಸಹ ಈ ರೀತಿಯ ಕೊಂಕು ತಗೆದಿಲ್ಲ.ಇಂದಿಗೂ ಕೂಡ ನಮ್ಮಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ.ಅವರಿಗೂ ಅವರ ಹೆಣ್ಮಕ್ಕಳು ಇಲ್ಲಿ ಖುಷಿಯಿಂದ ಇರುವುದನ್ನು ನೋಡಿ ಸಂತಸವಿದೆ.ಇಲ್ಲಿ ಎಲ್ಲರೊಂದಿಗೆ ಒಂದಾಗಿ ಎಲ್ಲ ಸಂದರ್ಭಗಳನ್ನು ಎದುರಿಸುವ ಪಾಠವನ್ನು ಇವರು ಕಲಿಯುತ್ತಿದ್ದರೆ ಯಾವ ತಂದೆ ತಾಯಿ ತಾನೇ ನೋವು ಮಾಡಿಕೊಳ್ಳುತ್ತಾರೆ ಹೇಳಿ...
ಇವರ ಮನೆಯ ಮದುವೆ ಸಂದರ್ಭಗಳನ್ನು ಕೇಳಿದರೆ ಈಗೆರಡು ವರ್ಷಗಳ ಹಿಂದೆ ನಡೆದ ಸಿನಿಮೀಯ ಘಟನೆಯನ್ನು ವಿವರಿಸುತ್ತಾರೆ. ಯಾವ ಗುಟ್ಟನ್ನೂ ಮುಚ್ಚಿಟ್ಟುಕೊಳ್ಳುವ ಜಾಯಮಾನದವರಲ್ಲ ಇಲ್ಲಿಯವರು.'ನಮ್ಮ ಮನೆಯ ಹುಡುಗನೊಂದಿಗೆ ಮದುವೆ ಗೊತ್ತಾದ ಹುಡುಗಿಯೊಬ್ಬಳು ನಾಪತ್ತೆಯಾಗಿರುವುದಾಗಿ ಸುದ್ದಿ ಬರುತ್ತದೆ.ಇದನ್ನು ತಿಳಿದು ನಾವಲ್ಲಿಗೆ ಹೋದರೆ ಅದೊಂದು ಕಟ್ಟು ಕತೆ.ಅಂತೂ ಬೀಗರಾಗುವವರೊಂದಿಗೆ ಮತುಕತೆ ಮುಗಿಸಿಕೊಂಡು ಬಂದೆವು. ಆದರೆ ಮತ್ತೆರಡೇ ದಿನಕ್ಕೆ ಮತ್ತದೇ ಸುದ್ದಿ.ಈ ಬಾರಿಯೂ ಅದು ನಿಜವಾಗಲಿಲ್ಲವಾದರೂ ಅವರ ಮನೆಗೆ ತೆರಳಿ ಹೀಗೆಲ್ಲಾ ಸುದ್ದಿಯ ಕುರಿತು ವಿಚಾರಣೆ ಮಾಡಿಕೊಂಡು ಬಂದದ್ದಾಯಿತು.ಮದುವೆಯ ದಿನ ಬಂದೇ ಬಿಟ್ಟಿತು.ನೆಂಟರೆಲ್ಲ ಬಂದಿದ್ದರು. ಇನ್ನೇನು ಮಹೂರ್ತ ಬಂದೇ ಬಿಟ್ಟಿತು.ಅಷ್ಟೊತ್ತಾದರೂ ಹಣ್ಣಿನ ಕಡೆಯವರು ಬಂದೇ ಇಲ್ಲ. ಎಷ್ಟು ಕಾದರೂ ಬರಲೇ ಇಲ್ಲ.ಆಗ ನಮ್ಮ ಮನೆಯ ಮರ್ಯಾದೆ ಕಾಪಾಡಿದವಳು ನೇತ್ರಾವತಿ ಎಂಬ ಹೆಣ್ಮಗಳು.ಸಂಭಂಧಿಕರೊಬ್ಬರ ಮಾತಿನ ಮೇರೆಗೆ ತತ್ಕ್ಷಣದಲ್ಲಿ ಹಸೆಮಣೆಯೇರಿದಳು.ಇಂದು ನಮ್ಮೆಲ್ಲರೊಂದಿಗೆ ಚೆನ್ನಾಗಿ ಬೆರೆತಿದ್ದಾಳೆ.ಅವಸರದಲ್ಲಿ ನಮ್ಮವಳಾದರೂ ನಮ್ಮ ಕುಟುಂಬವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ.ಈ ನೆಮ್ಮದಿಯ ಹಿಂದೆ ಒಬ್ಬರನ್ನೊಬ್ಬರು ಪರಸ್ಪರ ಅರ್ಥೈಸಿಕೊಳ್ಳುವುದರ ಪಾಲು ಬಲು ದೊಡ್ಡದಿದೆ.
ಇದೆಲ್ಲಾ ಒತ್ತಟ್ಟಿಗಿರಲಿ,ಇವರ ನಡುವೆ ಭಾಂದವ್ಯ ಇರುವ ರೀತಿಯನ್ನು ನೋಡಿದರೆ ಅಚ್ಚರಿ...ಇಲ್ಲಿಯ ನಾಲ್ಕು ಅಂಕಣದ ದೊಡ್ಡ ಮನೆಯಲ್ಲಿ ಗೋಡೆಗಳ ಸಂಖ್ಯೆ ತುಂಬಾ ಕಡಿಮೆ.ಮನೆಯಲ್ಲೂ ಮನದಲ್ಲೂ ಗೋಡೆಗಳು ಇಲ್ಲಿ ತುಂಬಾ ಕಡಿಮೆ.ಮೂರು ಪ್ರತ್ಯೇಕ ಸಂಸಾರಗಳಿದ್ದರೂ ಒಂದೇ ಮನೆಯಲ್ಲಿ ಸಾಂಗವಾಗಿ ಸಾಗುತ್ತಿವೆ.ಉದ್ದಾನುದ್ದ ಪಡಸಾಲೆ.ಒಳಜಗುಲಿಗೂ ಗೋಡೆಯ ಹಂಗಿಲ್ಲ.ಅಲ್ಲಿಂದ ಹೆಬ್ಬಾಗಿಲ ಮೂಲಕ ಒಳಹೊಕ್ಕರೆ ಅಲ್ಲೂ ಮೂರು ಸಬಂಧ ಒಳ ಕೋಲಿ. ಮುಂದೆ ದೇವರ ಮನೆ ಮಾತ್ರ ಮೂರು ಪ್ರತ್ಯೇಕವಾಗಿದ್ದದ್ದು ಬಿಟ್ಟೆರೆ,ಅಡುಗೆ ಮನೆಯೂ ಕಡ ಒಂದೇ ಇದೆ.ಆದರೆ ದಿನವೂ ಬೇರೆ ಬೇರೆ ಅಡುಗೆ ಮಾಡಿದರೂ ಸಹ ಅದನ್ನು ಹಂಚಿಕೊಳ್ಳುವುದು ರೂಢಿ. ವರ್ಷಕ್ಕೆ ಹೊಸಕ್ಕಿ ಹಬ್ಬ,ದೀಪಾವಳಿ,ಆರಧೃ ಮಳೆ ಹಬ್ಬ , ಚೌತಿ, ತುಳಸಿ ಹಬ್ಬ ಹಾಗೂ ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಊಟ ಮಾಡುತ್ತಾರೆ.ಪ್ರತಿ ನಿತ್ಯವೂ ಎಲ್ಲರಮನೆಯಲ್ಲೂ ಒಂದೇ ಸಲ ಊಟಕ್ಕೆ ತೆರಳುವ ರೂಡಿಯೂ ಇದೆಯಂತೆ.!
ಇದೆಲ್ಲಕ್ಕಿಂತ ಹೆಚ್ಚಿನದಾಗಿ ಇಲ್ಲಿ ಪ್ರತಿಯೊಂದು ಸೌಲಭ್ಯ ಕೂಡ ಒಂದೇ ಇರುವುದು ಇನ್ನೊಂದು ಸೋಜಿಗ.ಮನೆಯಂಗಳದಲ್ಲಿ ತುಳಸಿ ಕಟ್ಟೆ ಒಂದೇ ಇದೆ.ಬಾವಿ ಸಹ ಒಂದೇ ಇದೆ. ಮನೆಯ ಹಿಂದುಗಡೆ ಒಂದೇ ಕೊಟ್ಟಿಗೆಯಲ್ಲಿ ದನಗಳನ್ನು ಸಾಕುತ್ತಾರೆ. ಇವರ ಮನೆಯ ಟೆಲಿಪೋನ್ ಸಹ ಒಂದೇ ಇದೆ. (08384-247627) ಪೋನ್ ಹೊರಗಡೆಯೇ ಇರೋದ್ರಿಂದ ನಾವೆಲ್ಲಿಗೇ ಹೋದ್ರೂ ಯಾರಾದ್ರೂ ಎತ್ತಿ ಮಾತನಾಡಬಹುದು, ಆಮೇಲೆ ವಿಷಯ ಕೇಳ್ಕೊಂಡ್ರೆ ಆಯ್ತಪ್ಪಾ ಅನ್ನುತ್ತಾರೆ ಅಶೋಕ ಗೌಡ.
ಮುಂದೆಯೂ ಕೂಡ ಇದೇ ರೀತಿ ಇರುವಂತೆ ದೇವರು ನಮ್ಮ ಮಕ್ಕಳಿಗೆ ಶಕ್ತಯನಗನು ಕೊಡಲಿ ಅನ್ನುತ್ತಾರೆ ಇಲ್ಲಿಯ ಪ್ರತಿಯೊಬ್ಬರೂ ಸಹ.ಯಾವುದೇ ಸ್ವಾರ್ಥವಿಲ್ಲದ ಬದುಕಿನ ವಾಸ್ತಾವಾಂಶಗಳನ್ನು ಸಹಜವಾಗಿ ಸ್ವೀಕರಿಸುತ್ತ ಸಂಬಂಧಗಳಿಗೆ ಪ್ರಾಶಸ್ತ್ಯವನ್ನು ಕೊಡುವ ಇವರಬದುಕು ನಿಜಕ್ಕೂ ಅನುಕರಣೀಯ.
ದಿನದಿಂದ ದಿನಕ್ಕೆ ಮನುಷ್ಯನೆಂಬೋ ಮನುಷ್ಯ ಈ ಬದುಕು ಕೇವಲ ಸ್ವಂತದ್ದು. ತಾನು ಮನ ಬಂದಂತೆ ಬದುಕುತ್ತೇನೆ ಎಂದು ಸಂಬಂಧಗಳನ್ನು ಕಡೆಗಣಿಸಿ ತನ್ನಸುತ್ತ ತಾನೇ ಜೇಡದಂತೆ ಬಲೆ ನೇಯ್ದುಕೊಳ್ಳುತ್ತಿದ್ದಾನೆ.ಇದರ ಪರಿಣಾಮವಾಗಿ ಸಂಕುಚಿತನಾಗುತ್ತಾ ಆಗುತ್ತಾ ಜೀವನದ ನೈಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದಾನೆ.ಬೇರೊಬ್ಬನ ಸಲುವಾಗಿ ಒಂದು ಚಿಕ್ಕ ಹೊಂದಾಣಿಕೆಯನ್ನೂ ಸಹ ಮಾಡಿಕೊಳ್ಳಲು ತಯಾರಿಲ್ಲದ ಪರಿಸ್ಥಿತಿಯಲ್ಲಿ ಇಂದಿನ ಹೊಸ ತಲೆಮಾರೆಂಬ ಪ್ರಭೃತಿಗಳು ತಯಾರಾಗುತ್ತಿವೆ. ಇಂತದ್ದರಲ್ಲಿ ಒಂದೇ ಮನೆಯಲ್ಲಿ ಮೂರು ಪ್ರತ್ಯೇಕ ಕುಟುಂಬಗಳು ಒಂದಾಗಿ ಜೀವಿಸುತ್ತ ಆಧುನಿಕ ಜೀವನಕ್ರಮಗಳೆಂಬ ಜೈಲಿನಿಂದ ಬಿಡಿಸಿಕೊಳ್ಳಲು ಸದಾ ಕಾಲ ತುಡಿಯುತ್ತಿದ್ದಾರೆ.ಇವರ್ಯಾಕೆ ನಮ್ಮ ಬದುಕಿನ ಆದರ್ಶವಾಗಬಾರದು?
3 ಕಣ್ಣುಗಳು...
ಈ ಸಾಮರಸ್ಯದ ಬದುಕಿಗೆ ದೇವಕಿ,ಮಾದೇವಿ,ಬಂಗಾರಿ ಇವರು ಮೂರು ಕಣ್ಣುಗಳಿದ್ದಂತೆ.ಒಂದೊಂದು ಕುಟುಂಬಕ್ಕೆ ಒಬ್ಬೊಬ್ಬರಂತೆ ಹಿರಿಯ ಸಾರಥಿಗಳು.. ಕರಿಯಾ ಹುಲಿಯಾ ಗೌಡರ ಸೊಸೆಯಂದಿರಾಗಿ ಈ ಮನೆಯ ಪ್ರವೇಶ ಪಡೆದ ಇವರ ವಂಶಬಳ್ಳಿ ಬೆಳೆದು ಇಂದಿಗೆ ಐವತ್ತು ಜನರನ್ನು ದಾಟಿದೆ. ಮಕ್ಕಳು,ಮೊಮ್ಮಕ್ಕಳನ್ನು ಕಂಡ ಈ ಹಿರಿಯ ಜೀವಗಳು ಈ ಮನೆಯ ಸಾಮರಸ್ಯದ ರೂವಾರಿಗಳು. ಹತ್ತು ಸೊಸೆಯರೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಇವರನ್ನು ಮಾತನಾಡಿಸಿದರೆ ಸೊಸೆಯಂದಿರ ಬಗ್ಗೆ ಹೆಮ್ಮೆಯ ಮಾತು ಹೊರಬೀಳುತ್ತದೆ.ಎಲ್ಲೆಲ್ಲಿಂದಲೋ ಬಂದವರು ಹೊಂದಿಕೊಂಡು ಹೋಗ್ತಾರೋ ಇಲ್ಲವೋ....ಅನ್ನುವ ಆತಂಕ ಮೊದಮೊದಲು ಕಾಡಿತ್ತಾದರೂ ಎಲ್ಲ ಸೊಸೆಯಂದಿರು ಹೊಂದಿಕೊಂಡಿದ್ದು ನೋಡಿ ಖುಷಿಯಾಯಿತು.ಎಲ್ಲಾದರೂ ಚಿಕ್ಕಪುಟ್ಟ ಸಮಸ್ಯೆಗಳು ತಲೆದೋರಿದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. "ನಾವು ಬಲ್ಲಾದೋರು ತಿಳಿಸಿ ಹೇಲಿದ್ರೆ ತಾನೇ ಕಿರೀರು ಅರ್ಥ ಮಾಡಿಕಳ್ಳಾದೂ... ಅದರಂತೆ ನಡಿಯಾದೂ..." ಅನ್ನುತ್ತಾರೆ.ಕುಟುಂಬ ಮೂರಾದರೂ ಮನಸ್ಸು ಒಂದೇ.ಇದುವೇ ಈ ಸಂಸಾರದ ಸಂತೋಷದ ಕೀಲಿಕೈ.ಇಂದಿನ ಸಮಾಜದ ಕೌಟುಂಬಿಕ ವ್ಯವಸ್ಥೆ ಇಂತಹ ಸಾವಿರ ಸಂತಸದ ಸಂಗತಿಗಳಿಂದ ಗಾವುದ ಗಾವುದ ದೂರ ಸರಿದಿದೆ.ಅಲ್ಲವೇ?
3 ಹೆಸರಿನ ಆರು ಮಂದಿ!
ಹೌದು! ಸಾಮಾನ್ಯವಾಗಿ ಇಷ್ಟು ದೊಡ್ಡ ಕುಟುಂಬದಲ್ಲಿ ಒಂದೇ ಹೆಸರಿನ ಇಬ್ಬರು ಇದ್ದರೆ ಅವರನ್ನು ಹೇಗೆ ಕರೆದುಕೊಳ್ಳುತ್ತಾರೆ.. ಮಾತನಾಡಿಸಿಕೊಳ್ಳುತ್ತಾರೆ... ಎಂಬ ಸಹಜ ಕುತೂಹಲದಿಂದ ಕೇಳಿದರೆ,ಒಂದಲ್ಲ ಎರಡಲ್ಲ..ಮೂರು ಹೆಸರಿನ ಆರು ಮಂದಿಯಿದ್ದಾರೆ!ಭಾರತಿಯಂದಿರಿಬ್ಬರು,ಮತ್ತಿಬ್ಬರು ಪಾರ್ವತಿಯಂದಿರು.ನೇತ್ರಾ ಎಂಬ ಸೊಸೆಯಂದಿರಿಬ್ಬರು.ಒಟ್ಟೂ ಆರು ಮಂದಿ.ಹಿರಿ ಸೊಸೆಗೆ ದೊಡದಡ ಪರ್ವತಿ ಅಂದರೆ ಕಿರಿಯ ಸೊಸೆಗೆ ಸಣ್ಣ ಪಾರ್ವತಿ ಅಂತ ಕರೆದುಕೊಳ್ಳುತ್ತಾರೆ.ಒಂದೇ ಒಂದು ದಿವಸವೂ ಒಬ್ಬರನ್ನು ಕರೆದರೆ ಇನ್ನೊಬ್ಬರು 'ಓ'ಗೊಟ್ಟ ಪ್ರಸಂಗ ನಡೆದಿಲ್ಲ ಅನ್ನುತ್ತಾರೆ ಗೌಡರ ಮನೆಯ ಸಣ್ಣ ನೇತ್ರಾ!
ಅಹಾ..3 ಚಹಾ!
ಮೂರು ಕುಟುಂಬಗಳು ಒಟ್ಟಾಗಿ ಜೀವನಸಾಗಿಸುತ್ತಿರುವ ಕುತೂಹಲದ ಸಂಗತಿಯ ಮಾಹಿತಿಯ ಜಾಡು ಹಿಡಿದು ಕೊಪ್ಪಲಗದ್ದೆಗೆ ತೆರಳಿದಾಗ ಮದ್ಯಾಹ್ನದ ಉರಿ ಬಿಸಿಲು.ನಾಲ್ಕಾರು ಮಹಿಳೆಯರು ಅಂಗಳದಲ್ಲಿ ಅಡಿಕೆ ಸುಲಿಯುತ್ತಿದ್ದರು.ನಮ್ಮನ್ನು ಅವರಿಗೆ ಪರಿಚಯಿಸಿಕೊಂಡು ನಮಗೆಅಗತ್ಯವಿದ್ದ ಮಾಹಿತಿಗಳನ್ನು ಪಡೆದುಕೊಂಡ ನಂತರ ಹೊರಟರೆ ಏಕಕಾಲಕ್ಕೆ ಮೂರೂ ಮನೆಗಳಿಂದ ಚಹಾ ಮಾಡಿಕೊಂಡು ನಮ್ಮೆದುರಿನ ಟೇಬಲ್ಲಿನ ಮೇಲೆ ತಂದಿಟ್ಟರು.!ಅದ್ಯಾವ ಅವಸರದಲ್ಲಿ ಮಾಡಿಕೊಂಡು ಬಂದರೋ ಗೊತ್ತಿಲ್ಲ.ಈಗೀಗ ನಮ್ಮಜೊತೆ ಮಾತಾಡುತ್ತಿದ್ದವರು ಹೋಗಿ ಚಹಾ ತಯಾರಿಸಿ ತಂದಿದ್ದರೆ ನಮಗೆ ಕುಡಿಯಲೂ ಆಗದೇ, ಬಿಟ್ಟು ಹಾಗೇ ಎದ್ದು ಬರಲಿಕ್ಕೂ ಆಗದ ಸಂಕಟ.
ನಾಗರಾಜ,ವೈದ್ಯ,
Tuesday, April 27, 2010
Monday, April 19, 2010
ಶೇವ್ಕಾರ: ಭತ್ತದೊಡಲು ಬತ್ತಿತು!
ಶೇವ್ಕಾರ ಭತ್ತವೆಂಬ ಅಪರೂಪದ ತಳಿ ಇಂದು ಕಣ್ಮರೆಯಾಗಿದೆ.ಆ ಕುರಿತು ನನ್ನ ಬರಹ ನಾಡಿನ ಹೆಮ್ಮೆಯ ದಿನಪತ್ರಿಕೆ " ಹೊಸದಿಗಂತ' ದಲ್ಲಿ ಪ್ರಕಟವಾಗಿದ್ದು ಹೀಗೆ. ಓದಿ.. ಅಭಿಪ್ರಾಯಿಸಿ.....
ತಳಿಯನ್ನು ಉಳಿಸಿಕೊಳ್ಳುವುದಕ್ಕೆ ನಿಮ್ಮದೇ ಆದ ವಿಚಾರಗಳನ್ನು ಚರ್ಚೆ ಮಾಡಿ......
http://hosadigantha.in/epaper.php?date=04-19-2010&name=04-19-2010-13
ತಳಿಯನ್ನು ಉಳಿಸಿಕೊಳ್ಳುವುದಕ್ಕೆ ನಿಮ್ಮದೇ ಆದ ವಿಚಾರಗಳನ್ನು ಚರ್ಚೆ ಮಾಡಿ......
http://hosadigantha.in/epaper.php?date=04-19-2010&name=04-19-2010-13
Tuesday, April 6, 2010
ಅದೂ ಬೆತ್ತಲೆ... ಇದೂ ಬೆತ್ತಲೆ... ಒಂದಕ್ಕೆ ಸಭ್ಯತೆಯ ಮೆರಗು... ಇನೊ್ನಂದಕ್ಕೆ ವೌಢ್ಯತೆಯ ಸೋಗು!
ಜುಲೈ 24.2009 ನೇ ಇಸ್ವಿ. ಸೂರ್ಯ ಆಗಷ್ಟೇ ಪಶ್ಚಿಮದಲ್ಲಿ ಕರಗಿದ್ದ. ಅಷ್ಟೇನೂ ಕತ್ತಲಾವರಿಸಿರಲಿಲ?. ಬಿಹಾರದ ಪಟನಾದ ಸುತ್ತ ಮುತ್ತಲ ಹಳ್ಳಿಗಳ ಎಲ್ಲರೂ ತಮ್ಮ ಹೊಲದ ಕಡೆಗೆ ಮುಖ ನೆಟ್ಟದ್ದರು... ಮುತ್ತೈದೆಯರು ವಯಸ್ಸಿಗೆ ಬಂದ ತಮ್ಮ ಹೆಣ್ಣು ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಹೊಲಕ್ಕೆ ಎಳೆದುಕೊಂಡು ಬಂದಿದ್ದರು. ಆಮೇಲೆ ನಡೆದದ್ದು ಮಾತ್ರ ಯಾರೂ ನಿರೀಕ್ಷಿಸದಿರುವಂತದ್ದೆ. ಆ ಯುವತಿಯರ ಉಟ್ಟ ಬಟ್ಟೆಯನ್ನು ಅರೆಕ್ಷಣದಲ್ಲಿ ಬಿಚ್ಚಿಸಿ ಅವರ ಕೈಯಲ್ಲಿ ನೇಗಿಲನ್ನು ಕೊಟ್ಟು ಹೊಲವನ್ನು ಉಳುಮೆ ಮಾಡಿಸಲಾಯಿತು! ಯಾವ ಹೆಣ್ಣೂ ಬಯಸಲಾರದ, ಒಪ್ಪಲಾರದ ಈ ಕೆಲಸವನ್ನು ಅವರಿಂದ ಮಾಡಿಸಲಾಯಿತು.ಆ ಮೂಲಕ ದೇವರಿಗೆ ಸವಾಲು ಹಾಕಲಾಯಿತು. ದೇವರನ್ನು ಪೇಚಾಟಕ್ಕೆ ಸಿಲುಕಿಸಲಾಲಾಯಿತು!
ಇದಕ್ಕೆಲ್ಲಾ ಕಾರಣವಿಷ್ಟೆ. ಜುಲೈ ತಿಂಗಳು ಮುಗಿಯುತಾ್ತ ್ಡಂತು. ಆದರೂ ಇನ್ನೂ ಬಿಳಿ ಅಂಚಿನ ಮೋಡ ಗರ್ಭ ಕಟ್ಟಲೇ ಇಲ?. ಕೃಷಿಯನ್ನೇ ನಂಬಿ ್ಡದುಕನ್ನು ನಡೆಸುತ್ತಿದ್ದ ಇವರಿಗೆ ಮಳೆ ಬಾರದೇ ನಿದ್ದೆಯೇ ಇಲ್ಲದಾಯಿತು. ತನ್ನಿಮಿತ್ತ ಆ ಯುವತಿಯರನ್ನು ಬೆತ್ತಲಾಗಿಸಿ ಹೊಲಕ್ಕಿಳಿಸಲಾಯಿತು. ದೇವರು ಮುಜುಗರಗೊಂಡು ಮಳೆ ಸುರಿಸುತಾ್ತನೆ ಎಂ್ಡ ನಂಬಿಕೆ ಇಲ್ಲಿಯ ಜನರಲ್ಲಿ ಇರುವುದೇ ಇದಕ್ಕಿರುವ ಕಾರಣ.
ಇನೊ್ನಂದು ಘಟನೆ ತೀರಾ ಎರಡು ವರ್ಷಗಳ ಹಿಂದೆ ಗುಲ್ಬರ್ಗಾದಲ್ಲಿ ನಡೆಯಿತು. ಮಹಿಳೆಯ್ಡ್ಬೊಳು ಮಾಟ ಮಂತ್ರಗಳನ್ನು ಮಾಡುತಾ್ತಳೆಂ್ಡ ಕಾರಣಕ್ಕೆ ನೆರೆಯವರೇ ಅವಳ ಮೇಲೆ ದೌರ್ಜನ್ಯವೆಸಗಿದರು. ಅದು ಯಾವ ಪರಿಯಲ್ಲಿ ಭಯಾನಕವಾಗಿತ್ತೆಂದರೆ ನಡುರಸ್ತೆಯಲ್ಲಿ ಬೆತ್ತಲಾಗಿಸಿ ಮೆರವಣಿಗೆ ಮಾಡಲಾಯಿತು. ಮರಕ್ಕೆ ಕಟ್ಟಿ ತಲೆ ಬೋಳಿಸಲಾಯಿತು. ಚಪ್ಪಲಿಯ ಹಾರವನ್ನು ಹಾಕಲಾಯಿತು... ಇದಕ್ಕಿಂತ ಭಯಾನಕ ಸಂಗತಿ ಇನೊ್ನಂದಿದೆ. ಈ ದೌರ್ಜನ್ಯವನ್ನು ಪ್ರತಿಭಟಿಸಿ, ಆ ಕುಟುಂ್ಡಕ್ಕೆ ಸಾಂತ್ವನ, ತಿಳುವಳಿಕೆಯನ್ನು ನೀಡುವುದಕ್ಕೆ ಮಹಿಳಾ ಸಂಘಟನೆಗಳು ಅವರ ಮನೆಗೆ ತೆರಳಿದರೆ ‘ನಾವು ಹಿಂದಿನ ಜನ್ಮದಲ್ಲಿ ಆ ತಪ್ಪನ್ನು ಮಾಡಿದ್ದೆವೋ ಏನೋ..ಅದಕಾ್ಕಗಿ ದೇವರು ಈಗ ಶಿಕ್ಷೆ ಕೊಟ್ಟಿದಾ್ದನೆ’ ಎನ್ನುತಾ್ತ ತಮ್ಮ ಮೇಲಾದ ಆ ಕೃತ್ಯವನ್ನು ಸಮರ್ಥಿಸಿಕೊಳ್ಳುತಾ್ತರೆ ಈ ಕುಟುಂ್ಡದವರು!
ಇದನ್ನು ಮುಗಖತೆ ಅನ್ನ್ಡಹುದಾ? ಉಹುಂ. ್ಡರೇ ಅಷ್ಟೇ ಆಗಿದ್ದರೆ ್ಡಹು ಹಿಂದಿನಿಂದ ್ಡಂದ ನಂಬಿಕೆಗಳ ಪರಿಣಾಮ ಕೆಟ್ಟದ್ದೆಂದು ಮನವರಿಕೆ ಮಾಡಿಕೊಟ್ಟರೂ ಅದನ್ನು ಸ್ವೀಕರಿಸದ ಮಟ್ಟಿಗೆ ಈ ಮನುಷ್ಯರು ಸಾ್ಥಪಿತ ಹಿತಾಸಕ್ತಿಗಳಿಗೆ ಅಂಟಿಕೊಂಡಿರುತ್ತಿರಲಿಲ?ವಲಾ?...
ನಂಬಿಕೆಯೇ ಪ್ರಧಾನವಾಗಿರುವ ಭಾರತದಲ್ಲಿ ಇಂದಿಗೂ ಇಂತಹ ಬೇಕಾದಷ್ಟು ಪ್ರಕರಣಗಳು ನಡೆಯುತ್ತಿವೆ. ಜನಸಾಮಾನ್ಯರಲ್ಲಿರುವ ಈ ನಂಬಿಕೆಯ ಇವತ್ತಿನ ನಾಗರೀಕ ಜೀವನದ ನಿಯಮಾವಳಿಗಳ ಆಜು ಬಾಜಿನಲ್ಲಿ ಸಾಗುತ್ತಿರುತ್ತವೆ. ಸುಶಿಕ್ಷಿತ ಜನರು ್ಡಳಸುವ ನಾಚಿಕೆ, ಮರ್ಯಾದೆೆ, ಇತಾ್ಯದಿಗಳ ಹಂಗು ಇವರಿಗೆ ?ಸುವುದೂ ಇಲ?. ಯಾಕೆಂದರೆ ಇವರ ಜೀವಿತೋದ್ದೇಶವೇ ನಂ್ಡುವುದು. ನಂ್ಡುವುದು. ಮತ್ತು ನಂ್ಡುವುದು! ದೇವರನ್ನು, ಆಚರಣೆಗಳನ್ನು ಮನಸಾ ನಂ್ಡುತಾ್ತ ಪರಂಪರೆಯಾಗಿ ಬೆಳೆದು ್ಡಂದಿರುವ ಆಚರಣೆಗಳ ಜೊತೆಗೆ ವೌಢ್ಯಗಳನ್ನೂ ಉಸಿರಾಡುತಾ್ತ ್ಡದುಕಿಬಿಡುವ ಈ ಜನಕ್ಕೆ ಇಂತಹ ಆಚರಣೆಗೆ ಕಡಿವಾಣ ಹಾಕುವುದು ಕೂಡ ದೌರ್ಜನ್ಯದಂತೆ ಕಂಡರೆ ಅಚ್ಚರಿಯಿಲ?... ಇದನ್ನು ಆ ಜನರಿಗೆ ಅರ್ಥ ಮಾಡಿಸುವುದು ಹೇಗೆ?
±Ü¨ÜS £WÜÙÜá 1986 ರ ವರೆಗೂ ಶಿವವೊಗ್ಗ ಜಿಲ್ಲೆಯ ಚಂದ್ರಗುತ್ತಿಯಲ್ಲಿಯೂ ಬೆತ್ತಲೆ ಸೇವೆ ನಿರಾತಂಕವಾಗಿ ನಡೆಯುತ್ತಿತು?. ಮೈಗೆ ಹಸಿರೆಲೆಗಳನ್ನು ಸುತ್ತಿಕೊಂಡು ಯಾರೋ ಮಹಿಳೆ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದರೆ ಇಡೀ ಜಾತ್ರೆಯ ಗದ್ದಲ ಅವಳ ಸುತ್ತುವರೆಯುತ್ತಿತು?. ಇಂತಹ ಅಪಮಾನಕರ ಪ್ರಸಂಗದಲ್ಲಿ ಯಾವ ಹೆಣ್ಣೂ ಪಾಲು ಪಡೆಯಬಾರದು. ಹಾಗೊಂದು ಕಾರಣಕಾ್ಕಗಿಯೇ ಕಾನೂನು ರಚನೆಯಾಗಿದೆ.ಇದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾತ್ರ ಇಂದಿಗೂ ಅಗತ್ಯ ಮಟ್ಟದಲ್ಲಿ ಆಗಿಲ?. ಹಾಗಾಗಿ ಹರಕೆಯ ನೆಪದಲಿ?, ಆಚರಣೆಗಳ ಹೆಸರಲ್ಲಿ ಈ ಇಂದಿಗೂ ನಡೆಯುತ್ತಿದೆ. ದಾವಣಗೆರೆಯ ಉಚ್ಚಂಗಿಯಲ್ಲಿಯೂ ಇಂತಹ ಸೇವೆ ನಡೆಯಿತು. ಸಾವಿರ ಸಂಕಟಗಳನ್ನು ಬೆನ್ನಿಗಂಟಿಸಿಕೊಂಡು ಇಂಥ ಸ್ಥಿತಿಯನ್ನೂ ಅನುಭವಿಸಲು ಸಿದಖವಾಗುವ ಹೆಣ್ಣು ್ಡದುಕಿನ ಸಂಕಷ್ಟಗಳಿಂದ ಹೊರ ್ಡರುವುದಕ್ಕೆ ಕಡೆಯ ಅವಕಾಶವಾಗಿ ಈ ಸೇವೆಯನ್ನು ್ಡಳಸಿಕೊಳ್ಳುತ್ತಿದಾ್ದಳೆಯೇ? ಗೊತ್ತಿಲ?.
ಹಾಗಾದರೆ ನವ ನಾಗರೀಕತೆಯ ನಾರೀಮಣಿಯರಿಗೆ ಅಂತಹ ಯಾವ ದೈನೇಸಿತನವಿದೆ?
ಹುಟಾ್ಟ ಜನಪ್ರವಾಹದ ಜೊತೆಯೇ ಒಡನಾಟ... ್ಡಯಸಿದ್ದನ್ನು ತಿಳಿಯಲು ಬೇಕಾದಷ್ಟು ಅವಕಾಶ ... ಏನು ್ಡಯಸಿದರೂ ಸಿಗುವ ಈ ಸಾಮಾಜಿಕ ವಾತಾವರಣದಲ್ಲಿ ಬೆಳೆದ ಇವರನ್ನು ಅಷ್ಟರ ಮಟ್ಟಿಗೆ ಅಮಾಯಕ ಮುಗಖತೆಯೂ ಸುತ್ತುವರೆದಿಲ?. ತಾನು ಹೇಗೆ ಬೇಕಾದರೂ ಇರುತ್ತೇನೆ. ತನ್ನಿಷ?... ಅನ್ನುತಾ್ತ ಸಿನಿಮಾ ಸಂಸ್ಕೃತಿಯನು?, ವಿದೇಶೀ ಮೋಹವನ್ನು ಉಸಿರಾಡುತ್ತಿರುವ ನವ ಭಾರತದ ನಾರೀಮಣಿಯರ ್ಡಗ್ಗೆ ಹೇಳಿದರೆ ತುಸು ಕಟುವಾಗಿಯೇ ಕಾಣ್ಡಹುದು. ಇವತ್ತು ಮಹಿಳಾ ವೇದಿಕೆ, ಪುರುಷ ಸಂಘಟನೆಗಳು ಇಂತಹ ಯಾವ ರಾಗ ಬೇಧವೂ ಇಲ್ಲದೆಯೇ ಬೆತ್ತಲೆ ಸೇವೆಯಂತಹ ಪ್ರಕರಣಗಳು ನಡೆಯದಂತೆ ತಡೆಯಬೇಕು ಎಂದು ಬೊಬ್ಬಿಡುವುದನ್ನು ನೋಡಿದಾಗಲೆಲಾ್ಲ ಅನಿಸುವುದುಂಟು. ಅವರದಾ್ದದರೆ ಮುಗಖತೆ. ಮತ್ತು ವರ್ಷಕ್ಕೆ ಯಾವುದೋ ಒಂದು ದಿನ. ಇವತ್ತಿನ ಕಾಲೇಜು ಹುಡುಗಿಯರು, ಮೇಲ್ಮದ್ಯಮ ಸ್ತರದ ನಗರವಾಸೀ ಹಲವು ಮಹಿಳೆಯರು ಮುಂತಾದವರ ಜೀವನ ಕ್ರಮಗಳು, ಉಡುಗೆ ತೊಡುಗೆಗಳನ್ನು ಕಂಡಾಗ ಹಲವಾರು ಪ್ರಶ್ನೆಗಳು ಶುರುವಾಗುತ್ತದೆ. ಬೆತ್ತಲೆ ಸೇವೆಗೆ ವೌಢ್ಯವೆಂದು ಶಂಖ ಊದುವವರು ಇದಕ್ಕೇನು ಹೆಸರಿಡುತಾ್ತರೆ? ಅಥವಾ ಯಾವ ಸಮರ್ಥನೆಯನ್ನು ನೀಡುತಾ್ತರೆ? ಹಾಗೆ ಕಾನೂನಿನ ಮೂಲಕವೇ ಪ್ರತಿಯೊಂದನ್ನೂ ನಿಯಂತ್ರಿಸಲು ಒತಾ್ತಯ ಹೇರುವುದೇ ಸರಿಯಾದ ಕ್ರಮವೆಂದು ಭಾವಿಸಿದವರು ತಿಳುವಳಿಕೆಯನ್ನು ಮೂಡಿಸಡುವುದಕ್ಕೆ ಯಾಕೆ ಮುಂದಾಗುವುದಿಲ?? ಅದೂ ಬೆತ್ತಲೆ... ಇದೂ ಬೆತ್ತಲೆ... ಒಂದಕ್ಕೆ ಸಭ್ಯತೆಯ ಮೆರಗು ... ಇನೊ್ನಂದಕ್ಕೆ ವೌಢ್ಯತೆಯ ಸೋಗು ...
ಬೇಡದ ಸಂಗತಿಗಳಿಗೆ ಮೂಗು ತೂರಿಸಿ ಉದ್ದುದ್ದ ಬಾಷಣ ಬಿಗಿಯುವ ್ಡು(ಸು)ದಿಖ ಜೀವಿಗಳು ಇಂತಹ ಪ್ರಶ್ನೆಗಳನ್ನೆತ್ತಿಕೊಂಡು ಚರ್ಚೆ ಮಾಡುವುದಿಲ?. ಸಮಾಜಕ್ಕೆ ಹಿತಕೊಡಿಸುವ ಚರ್ಚೆಗೆ ಹೊಳಹುಗಳೇ ಸಿಗುವುದಿಲ್ಲವೇನೋ! ಈ ಬೆತ್ತಲೆ ಸೇವೆ, ಹಾಗೂ ಹೊಸ ತಲೆಮಾರಿನ ಜೀವನ ಕ್ರಮಗಳ ್ಡಗ್ಗೆ ಆಗುತ್ತಿರುವುದೂ ಸಹ ಇದೇ. ಈ ್ಡಗ್ಗೆ ಅವರು ಮಾತಾಡಬೇಕಿತು?. ಪರಿಹಾರವನ್ನು ಸೂಚಿಸಬೇಕಿತು?. ಆ ಜವಾಬಾ್ದರಿಯ ಅರಿವು ಅವರಿಗಾಗುವುದಿಲ್ಲವಲಾ್ಲ..ಛೇ!
ಹಾಗೆ ನೋಡಿದರೆ, ಈ ಎರಡರ ಪರಿಣಾಮವೂ ಸಮಾಜದ ಮೇಲೆ ಅಷ್ಟು ಗಾಢವಾಗಿಯೇ ಆಗುತ್ತದೆ. ನಿಷೆ?ಸುವುದಿದ್ದರೆ ಎರಡನ್ನೂ ನಿಷೆ?ಸಲಿ. ಕನಿಷ್ಠಪಕ್ಷ ಗೊತ್ತಿರದಿದ್ದವರಿಗೆ ತಿಳುವಳಿಕೆಯನಾ್ನದರೂ ನೀಡಲಿ...
ಅಲ್ಲವೇ?
--ನಾಗರಾಜ ವೈದ್ಯ

Subscribe to:
Posts (Atom)